ಹಿಂದೂ ಜ್ಯೋತಿಷ ಅಥವಾ ಭಾರತೀಯ ಜ್ಯೋತಿಷವು ಕನಿಷ್ಟ ಪಕ್ಷ 6000 ವರ್ಷ ಹಳೆಯ ಶಾಸ್ತ್ರ ಮತ್ತು ಪ್ರಪಂಚದ ಅತಿ ಹಳೆಯ ಪದ್ಧತಿಗಳಲ್ಲಿ ಒಂದಾಗಿದೆ. ನಾನು ತಂದೆಯವರಿಂದ ಜ್ಯೋತಿಷ ಕಲಿಯುವಾಗ ಮೊದಲು ಕೇಳಿದ ಪ್ರಶ್ನೆ “ಈ ಜಗತ್ತು ಹೇಗೆ ಪ್ರಾರಂಭ ಆಯಿತು ಮತ್ತು ಈ ಗ್ರಹಗಳಿಗೂ ಮನುಷ್ಯನಿಗೂ ಯಾವ ಸಂಬಂಧಗಳಿವೆ” ಅಂತ. ಆಗ ತಂದೆಯವರು ಪ್ರಾರಂಭ ಮಾಡಿದ್ದು ಪರಾಶರರ ಹೋರಾ ಶಾಸ್ತ್ರ ಗ್ರಂಥದ ಮೊದಲನೆ ಅಧ್ಯಾಯದಿಂದ. ಮೈತ್ರೇಯ ಮುನಿಗಳು ಪರಾಶರ ಮಹರ್ಷಿಗಳ ಶಿಷ್ಯರಾಗಿದ್ದರು. ಮೈತ್ರೆಯರು ಪರಾಶರರಿಗೆ ವಿಶ್ವದ ಸೃಷ್ಟಿಯContinue reading “ಭಾರತೀಯ ಜ್ಯೋತಿಷಶಾಸ್ತ್ರ ಮತ್ತು ಅದರ ಬೆಳವಣಿಗೆ”
Tag Archives: vedicastrology
ಕರ್ಕಾಟಕ (ಕರ್ಕ) ಲಗ್ನದ ಗುಣಲಕ್ಷಣಗಳು
ಹಿಂದಿನ ಸಂಚಿಕೆಯಲ್ಲಿ ನಾವು ಮಿಥುನ ಲಗ್ನದ ಗುಣ ಲಕ್ಷಣಗಳ ಬಗ್ಗೆ ತಿಳಿದಿದ್ದೆವು. ಇವತ್ತಿನ ಸಂಚಿಕೆಯಲ್ಲಿ ಕರ್ಕಾಟಕ ಲಗ್ನದ ಬಗ್ಗೆ ತಿಳಿಯೋಣ. ಇದು ರಾಶಿ ಚಕ್ರದಲ್ಲಿ ಬರುವ ನಾಲ್ಕನೆಯ ಮನೆ. ಇದು ಚರ ಲಗ್ನ. ಇದು ಉತ್ತರ ದಿಕ್ಕನ್ನು ಸೂಚಿಸುತ್ತದೆ. ಚಂದ್ರನು ಈ ಲಗ್ನಕ್ಕೆ ಅಧಿಪತಿ. ಇಲ್ಲಿ ಗುರುನು (ಬಲಿಷ್ಟ) ಉಚ್ಚನಾಗಿರುವನು. ಮಂಗಳನು ಇಲ್ಲಿ ದುರ್ಬಲನು. ಪ್ರತೀ ವರ್ಷ ಸೂರ್ಯನು ನಿರಯನ ಪದ್ದತಿಯ ಪ್ರಕಾರ ಅಂದಾಜು ೧೪ ಜುಲೈ ಇಂದ ೧೪ ಆಗಸ್ಟ ತಿಂಗಳವರೆಗೆ ಈ ಲಗ್ನದಲ್ಲಿ ಚಲಿಸುತ್ತಾನೆ.Continue reading “ಕರ್ಕಾಟಕ (ಕರ್ಕ) ಲಗ್ನದ ಗುಣಲಕ್ಷಣಗಳು”
ಮೇಷ ಲಗ್ನದ ಗುಣಲಕ್ಷಣಗಳು
ಒಂದು ವ್ಯಕ್ತಿಯ ಜೀವನದ ಮುಖ್ಯ ವಿಷಯಗಳ ಬಗ್ಗೆ ಹೇಳುವಾಗ ನುರಿತ ಜ್ಯೋತಿಷಿಗಳು ಜನ್ಮ ಲಗ್ನ,ಚಂದ್ರನಿರುವ ರಾಶಿ (ಜನ್ಮ ರಾಶಿ) ಮತ್ತು ಸೂರ್ಯನಿರುವ ರಾಶಿ ಇವುಗಳನ್ನು ಕೂಲಂಕುಷವಾಗಿ ಅಭ್ಯಾಸ ಮಾಡುತ್ತಾರೆ. ಇವೆಲ್ಲವುಗಳಲ್ಲಿ ಜನ್ಮ ಲಗ್ನ ಬಹಳ ಮುಖ್ಯವಾದದ್ದು. ಏಕೆಂದರೆ ಒಂದು ಶಿಶುವು ತಾಯಿಯ ಗರ್ಭದಿಂದ ಭೂಮಿಗೆ ಬರುವ ಸಮಯದಲ್ಲಿ ಪೂರ್ವದಲ್ಲಿ ಉದಯವಾಗುವ ರಾಶಿಯು ಆ ಶಿಶುವಿನ ಆತ್ಮಕ್ಕೆ ಮತ್ತು ಪ್ರಾಣಕ್ಕೆ ಸಂಬಂದಿಸಿದ್ದಾಗಿರುತ್ತದೆ ಎಂದು ಸಾರಾವಳಿ ಮತ್ತು ಸರ್ವಾರ್ಥ ಚಿಂತಾಮಣಿ ಗ್ರಂಥಗಳಲ್ಲಿ ಹೇಳಲಾಗಿದೆ. ಆ ಜನ್ಮ ಲಗ್ನವು ಶಿಶುವಿನ ಆಯುಷ್ಯ,Continue reading “ಮೇಷ ಲಗ್ನದ ಗುಣಲಕ್ಷಣಗಳು”
Mesha Lagna (Aries Ascendant)
The Lagna is one of the most important and influential signs in the Jataka (chart) as it determines one’s characteristics, personality, health, and many more crucial aspects of life. During the time of a person’s birth, the degree of the Rashi and Nakshatra pada which is rising on the eastern horizon is known as theContinue reading “Mesha Lagna (Aries Ascendant)”
The Planets in Hindu Jyotisha
At the center of our solar system, the sun ties earth and the other 9 planets through attraction and magnetic forces moving them around itself. The motion of these 9 planets are such that the velocity of planets has an inverse relationship with the distance between the planets and the sun. We know that althoughContinue reading “The Planets in Hindu Jyotisha”
ಜಾತಕ, ಲಗ್ನ ಮತ್ತು ಭಾವಗಳು
ಮನುಷ್ಯ ಜೀವನದಲ್ಲಿ ಬರುವ ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡುವಾಗ ಜಾತಕ ಪರಿಶೀಲನೆ ನಡೆಯುತ್ತದೆ. ಹಾಗಾದರೆ ಜಾತಕ ಎಂದರೇನು, ಇದನ್ನು ಹೇಗೆ ತಯಾರಿಸಲಾಗುತ್ತದೆ ಎಂದು ತಿಳಿಯೋಣ. ಹಿಂದಿನ ಸಂಚಿಕೆಗಳಲ್ಲಿ ರಾಶಿಗಳು, ಗ್ರಹಗಳು ಮತ್ತು ನಕ್ಷತ್ರಗಳ ಬಗ್ಗೆ ತಿಳಿದಿದ್ದೆವು. ಈ ಸಂಚಿಕೆಯಲ್ಲಿ ಜಾತಕ, ಲಗ್ನ ಮತ್ತು ಭಾವಗಳ ಬಗ್ಗೆ ತಿಳಿಯೋಣ. ಯಾವುದೇ ವ್ಯಕ್ತಿಯ ಜನನ ಕಾಲಕ್ಕೆ ಚಂದ್ರನು ಯಾವ ರಾಶಿಯಲ್ಲಿ ಇರುತ್ತಾನೊ ಅದು ಆ ವ್ಯಕ್ತಿಯ ಜನ್ಮ ರಾಶಿ ಆಗುತ್ತದೆ ಎಂದು ತಿಳಿದಿರುವ ವಿಷಯ. ಮನುಷ್ಯನ ಜನನದ ಸಮಯದಲ್ಲಿContinue reading “ಜಾತಕ, ಲಗ್ನ ಮತ್ತು ಭಾವಗಳು”
ಜ್ಯೋತಿಷ ವಿಜ್ಞಾನದಲ್ಲಿ ಗ್ರಹಗಳು
ಸೂರ್ಯನ ಮೂಲದಿಂದ ಶಕ್ತಿಯನ್ನು ಹೀರಿ ಪ್ರಭಾವ ಬೀರುವ ಆಕಾಶ ಕಾಯಗಳಿಗೆ ಗ್ರಹಗಳು ಎಂದು ಕರೆಯಲಾಯಿತು.ಗ್ರಹಗಳು ಆಕಾಶ ಮಂಡಲದಲ್ಲಿ ಭೂಮಿ ಮತ್ತು ಸೂರ್ಯರಂತೆ ಘನ ಗಾತ್ರ ಉಳ್ಳ ಕಾಯಗಳು. ಗ್ರಹ ಎಂದರೆ ಗ್ರಹಿಸು ಎಂದರ್ಥ. ಜ್ಯೋತಿಷದಲ್ಲಿ ಗ್ರಹಗಳಿಗೆ ಬಹಳ ಮಹತ್ವವಿದೆ. ಗ್ರಹಗಳು ನಮ್ಮ ಕರ್ಮಫಲಗಳನ್ನು ನಾವು ಅನುಭವಿಸುವಂತೆ ಮಾಡುವವರು ಎಂಬ ನಂಬಿಕೆ ಇದೆ. ಋಗ್ವೇದದಲ್ಲಿ ಕೆಲ ಶ್ಲೋಕಗಳು ಗ್ರಹಗಳ ಚಲನೆ ಮತ್ತು ಮನುಷ್ಯನ ಮೇಲೆ ಅವರ ಪ್ರಭಾವಗಳನ್ನು ವಿವರಿಸುತ್ತವೆ. ಸೂರ್ಯನು ತನ್ನ ಆಕರ್ಷಣ ಬಲದಿಂದ ಭೂಮಿ ಮತ್ತು ಇತರContinue reading “ಜ್ಯೋತಿಷ ವಿಜ್ಞಾನದಲ್ಲಿ ಗ್ರಹಗಳು”
ಮಾಸಗಳು, ಅಧಿಕ ಮತ್ತು ಕ್ಷಯ ಮಾಸ
ಅನಾದಿ ಕಾಲಗಳಿಂದ ಭಾರತದಲ್ಲಿ ನಿರ್ಧಿಷ್ಠವಾದ ಸಮಯ, ವಾರ, ನಕ್ಷತ್ರ ಮತ್ತು ಪಕ್ಷಗಳನ್ನು ತಿಳಿಯಲು ಪಂಚಾಂಗವೆಂಬ ಕೈಪಿಡಿ ಉಪಯೋಗಿಸಲಾಗುತ್ತಿತ್ತು.ಈಗಲೂ ನಾವುಗಳು ಉಪಯೋಗಿ ಸುತ್ತಿದ್ದೇವೆ. ಈ ಪಂಚಾಂಗವನ್ನು ಸೂರ್ಯ ಮತ್ತು ಚಂದ್ರರ ಚಲನೆಗಳ ಆಧಾರದ ಮೇಲೆ ರಚಿಸಲಾಗಿದೆ. ಸುಮಾರು 4ನೇ ಶತಮಾನದಲ್ಲಿ ಬರೆದ “ಸೂರ್ಯ ಸಿದ್ಧಾಂತ” ಎಂಬ ಸಂಸ್ಕೃತ ಗ್ರಂಥವು ಗಣಿತ ಮತ್ತು ಖಗೋಲ ಶಾಸ್ತ್ರದ ಅಧ್ಯಯನವನ್ನೊಳಗೊಂಡ ಪಂಚಾಂಗ ಮತ್ತು ಜ್ಯೊತಿಷ್ಯದ ಬಗ್ಗೆ ತಿಳಿಸಿಕೊಡುತ್ತದೆ. ಆ ಸಮಯದಲ್ಲೇ ಜನರಿಗೆ ಸೂರ್ಯ ಮತ್ತು ಚಂದ್ರರ ಗ್ರಹಣಗಳ ಬಗ್ಗೆಯೂ ಅರಿವಿತ್ತು. “ಸೂರ್ಯ ಸಿದ್ಧಾಂತ”Continue reading “ಮಾಸಗಳು, ಅಧಿಕ ಮತ್ತು ಕ್ಷಯ ಮಾಸ”
Adhika Maasa and Kshaya Maasa
In the last post about Souramaana and Chandramaana Maasa, we talked about the rashi chakra. “When the earth orbits the sun, it appears as if the sun is moving around the earth. This movement, however, is not real. When using the earth as a reference point for the sun’s “movement”, there is an imaginary areaContinue reading “Adhika Maasa and Kshaya Maasa”
ರಾಶಿ ಮತ್ತು ನಕ್ಷತ್ರಗಳು
ನಾವು ಆಕಾಶ ಮಂಡಲದಲ್ಲಿ ಬೇರೆ ಗ್ರಹದ ಮೇಲಿಂದ ಭೂಮಿಯನ್ನು ನೋಡಿದಾಗ ಅದು ಗೋಳಾಕಾರದ ಚೆಂಡಿನಂತೆ ಇದ್ದು ತನ್ನದೇ ಆದ ಕಕ್ಷೆಯಲ್ಲಿ ಸೂರ್ಯನ ಸುತ್ತಲೂ ಸುತ್ತುತ್ತಾ ಇರುವುದು ಕಂಡುಬರುತ್ತದೆ. ಚಂದ್ರ ಗ್ರಹವು ಭೂಮಿಯ ಉಪಗ್ರಹವಾಗಿದ್ದು, ಭೂಮಿಯ ಸುತ್ತಲೂ ತಿರುಗುತ್ತದೆ. ಸೂರ್ಯನು ಆಗಸದಲ್ಲಿ ವರ್ಷದುದ್ದಲೂ ಚಲಿಸುವ ಗೋಚರ ಪಥಕ್ಕೆ ಕಾಂತಿವೃತ್ತವೆಂದು ಹೆಸರು.ಈ ಕಾಂತಿವೃತ್ತದ ಎರಡೂ ಕಡೆಗಳಲ್ಲಿ ೯ ಡಿಗ್ರಿಗಳಷ್ಟು ವ್ಯಾಪಿಸಿರುವ ವಲಯಕ್ಕೆ ಭಚಕ್ರ ಎಂದು ಕರೆಯುತ್ತಾರೆ. ಈ ಭಚಕ್ರವು ಭೂಮಿಯ ಸುತ್ತ ಆವರಿಸಿರುವ ಒಂದು ಕಾಲ್ಪನಿಕ ವೃತ್ತ ವಲಯ. ಈContinue reading “ರಾಶಿ ಮತ್ತು ನಕ್ಷತ್ರಗಳು”