ನಾವು ಆಕಾಶ ಮಂಡಲದಲ್ಲಿ ಬೇರೆ ಗ್ರಹದ ಮೇಲಿಂದ ಭೂಮಿಯನ್ನು ನೋಡಿದಾಗ ಅದು ಗೋಳಾಕಾರದ ಚೆಂಡಿನಂತೆ ಇದ್ದು ತನ್ನದೇ ಆದ ಕಕ್ಷೆಯಲ್ಲಿ ಸೂರ್ಯನ ಸುತ್ತಲೂ ಸುತ್ತುತ್ತಾ ಇರುವುದು ಕಂಡುಬರುತ್ತದೆ. ಚಂದ್ರ ಗ್ರಹವು ಭೂಮಿಯ ಉಪಗ್ರಹವಾಗಿದ್ದು, ಭೂಮಿಯ ಸುತ್ತಲೂ ತಿರುಗುತ್ತದೆ. ಸೂರ್ಯನು ಆಗಸದಲ್ಲಿ ವರ್ಷದುದ್ದಲೂ ಚಲಿಸುವ ಗೋಚರ ಪಥಕ್ಕೆ ಕಾಂತಿವೃತ್ತವೆಂದು ಹೆಸರು.ಈ ಕಾಂತಿವೃತ್ತದ ಎರಡೂ ಕಡೆಗಳಲ್ಲಿ ೯ ಡಿಗ್ರಿಗಳಷ್ಟು ವ್ಯಾಪಿಸಿರುವ ವಲಯಕ್ಕೆ ಭಚಕ್ರ ಎಂದು ಕರೆಯುತ್ತಾರೆ. ಈ ಭಚಕ್ರವು ಭೂಮಿಯ ಸುತ್ತ ಆವರಿಸಿರುವ ಒಂದು ಕಾಲ್ಪನಿಕ ವೃತ್ತ ವಲಯ. ಈContinue reading “ರಾಶಿ ಮತ್ತು ನಕ್ಷತ್ರಗಳು”
Category Archives: ಕನ್ನಡ ಬ್ಲಾಗ್
ಅಯನಗಳು ಮತ್ತು ಸಂವತ್ಸರಗಳು
ಅಯನಗಳು ಸೂರ್ಯನು ನಮ್ಮ ಜೀವನದ ಅವಿಭಾಜ್ಯ ಅಂಗ ಎಂದು ನಮಗೆಲ್ಲ ತಿಳಿದೇ ಇದೆ. ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ತಿರುಗಲು ಅಂದಾಜು 365 ದಿನಗಳು ಬೇಕು. ಈ ಒಂದು ವರ್ಷದ ಚಲನೆಯಲ್ಲಿ ನಾವು ವಾತಾವರಣದಲ್ಲಿ ಬದಲಾವಣೆಗಳನ್ನು ಕಾಣುತ್ತೇವೆ. ಹಾಗೆಯೇ ಭೂಮಿಯ ಮೇಲೆ ಬೀಳುವ ಸೂರ್ಯನ ಕಿರಣಗಳ ಕೋನವು ಸಹ ಬದಲಾಗುತ್ತದೆ. ಪ್ರತಿ ದಿನ ಸೂರ್ಯೋದಯ ಮತ್ತು ಸೂರ್ಯಾಸ್ತ ಬಿಂದುಗಳನ್ನು ಒಂದು ನಿಶ್ಚಿತ ಜಾಗದಲ್ಲಿ ನಿಂತು ಗುರುತಿಸಿದಾಗ, ಆ ಬಿಂದುಗಳು ಪುಷ್ಯ ಮಾಸದಿಂದ ಆಷಾಢ ಮಾಸದವರೆಗೆ (ಡಿಸೆಂಬರ್Continue reading “ಅಯನಗಳು ಮತ್ತು ಸಂವತ್ಸರಗಳು”
ವಾರಗಳು, ಪಕ್ಷಗಳು ಮತ್ತು ತಿಥಿಗಳು
ನಮ್ಮ ಪೂರ್ವಜರು ಮತ್ತು ನಾವುಗಳೆಲ್ಲ ಹುಟ್ಟಿದಾಗಿನಿಂದ ವಾರ, ಪಕ್ಷ ಮತ್ತು ತಿಥಿಗಳ ಬಗ್ಗೆ ಕೇಳುತ್ತಾ ಬಂದಿದ್ದೇವೆ. ಅದನ್ನೇ ಕೂಡ ಅನುಸರಿಸುತ್ತಾ ಇದ್ದೇವೆ. ಹಾಗಾದರೆ ಈ ಇವುಗಳ ಉದ್ಭವ ಹೇಗಾಯಿತು? ಯಾವ ಆಧಾರಗಳ ಮೇಲೆ ಇವುಗಳನ್ನು ರಚಿಸಲಾಗಿದೆ ಎಂದು ತಿಳಿಯೋಣ. ಕ್ರಿಸ್ತಶಕ ಸಮಯಕ್ಕಿಂತಲೂ ಸಾವಿರಾರು ವರ್ಷಗಳಿಗೆ ಮೊದಲು ಭಾರತದಲ್ಲಿ ಸಮಯ ಮತ್ತು ಸಮಯವನ್ನು ಅಳೆಯುವ ಪದ್ಧತಿ ಇತ್ತು ಎಂದು ವೇದಗಳ ಮುಖಾಂತರ ತಿಳಿಯಲ್ಪಡುತ್ತೇವೆ. ಅಷ್ಟೊಂದು ವರ್ಷಗಳ ಮೊದಲೇ ನಮ್ಮ ಪೂರ್ವಜರಿಗೆ ಗ್ರಹಗಳ ಚಲನೆ, ಗ್ರಹಣಗಳ ಉಂಟಾಗುವಿಕೆ, ಋತುಗಳಲ್ಲಿ ಬದಲಾವಣೆContinue reading “ವಾರಗಳು, ಪಕ್ಷಗಳು ಮತ್ತು ತಿಥಿಗಳು”
ಜ್ಯೋತಿಷ
ಸಮಾನ್ಯವಾಗಿ ಎಲ್ಲರಿಗೂ ಜ್ಯೋತಿಷದ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಜ್ಯೋತಿಷ ಎಂದರೇನು, ಗ್ರಹಗಳು ಭೂಮಿಯ ಮೇಲಿರುವ ಮನುಷ್ಯನ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ, ಮತ್ತು ಜ್ಯೋತಿಷದ ಉದ್ಭವ ಯಾವಾಗ ಆಯಿತು, ರಾಶಿ, ನಕ್ಷತ್ರ ಮತ್ತು ಲಗ್ನ ಎಂದರೇನು? ರಾಶಿ ಫಲ ಮತ್ತು ಲಗ್ನ ಫಲಗಳು ಹೇಗೆ ಪ್ರಭಾವ ಬೀರುತ್ತವೆ ಹೀಗೆ ಹಲವಾರು ಪ್ರಶ್ನೆಗಳಿವೆ. ಇವೆಲ್ಲವುಗಳನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಬಹುದೆ? ಹಾಗಾದರೆ ಮೊದಲು ಜ್ಯೋತಿಷದ ಇತಿಹಾಸ ತಿಳಿಯುವುದು ಅತ್ಯವಶ್ಯ. ಜ್ಯೋತಿಷ ಎಂಬ ಶಬ್ದ ಸಂಸ್ಕೃತದ “ಜ್ಯೋತಿ” ಶಬ್ದದಿಂದ ಬಂದಿದೆ.Continue reading “ಜ್ಯೋತಿಷ”